LPG Gas Booking: ರೂಲ್ಸ್ ಬದಲಾವಣೆ! ಸಿಲಿಂಡರ್ ಬೇಗ ಮನೆಗೆ ಬರಬೇಕಾದ್ರೆ ಈ ಟ್ರಿಕ್ ಮಿಸ್ ಮಾಡ್ಬೇಡಿ!
LPG Gas Booking: ಗ್ಯಾಸ್ ಸಿಲಿಂಡರ್ ಬುಕ್ ಮಾಡೋಕೆ ಈಗ ಏಜೆನ್ಸಿ ಮುಂದೆ ಹೋಗಿ ಕ್ಯೂನಲ್ಲಿ ನಿಲ್ಲೋ ಅಗತ್ಯವೇ ಇಲ್ಲ. ನಿಮ್ಮ ಮೊಬೈಲ್ ಬಳಸಿ ಕೇವಲ ಕೆಲವು ನಿಮಿಷಗಳಲ್ಲಿ ಸಿಲಿಂಡರ್ ಆರ್ಡರ್ ಮಾಡಬಹುದು. ಡಿಜಿಟಲ್ ವಿಧಾನಗಳ ಮೂಲಕ ಬುಕ್ಕಿಂಗ್ ಮಾಡೋದು ತುಂಬಾ ಸುಲಭವಾಗಿದೆ.
ಗ್ಯಾಸ್ ಬುಕ್ ಮಾಡುವ ಮುನ್ನ ಕೆಲವು ಮುಖ್ಯ ಮಾಹಿತಿಗಳನ್ನು ಸಿದ್ಧವಾಗಿಟ್ಟುಕೊಳ್ಳೋದು ಉತ್ತಮ. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್, 16 ಅಂಕಿಯ ಎಲ್‌ಪಿಜಿ ಐಡಿ (LPG ID) ಅಥವಾ ಕಸ್ಟಮರ್ ನಂಬರ್ ಕೈಯಲ್ಲಿ ಇರಬೇಕು. ಜೊತೆಗೆ ಡೆಲಿವರಿ ಸಮಯದಲ್ಲಿ OTP ಅಥವಾ ಡೆಲಿವರಿ ಕೋಡ್ ಬೇಕಾಗಬಹುದು, ಅದನ್ನು ಕೂಡ ಗಮನದಲ್ಲಿಡಿ.
ನಿಮಗೆ ಆ್ಯಪ್ ಅಥವಾ ಇಂಟರ್ನೆಟ್ ಬಳಸೋಕೆ ಇಷ್ಟವಿಲ್ಲ ಅಂದ್ರೆ, IVRS (Automatic Call System) ಮೂಲಕವೂ ಸುಲಭವಾಗಿ ಬುಕ್ ಮಾಡಬಹುದು. ಉದಾಹರಣೆಗೆ, ಇಂಡೇನ್ ಗ್ರಾಹಕರು 7718955555 ನಂಬರ್‌ಗೆ ಕರೆ ಮಾಡಿ, ಕೇಳುವ ಸೂಚನೆಗಳನ್ನು ಫಾಲೋ ಮಾಡಿ ರಿಫಿಲ್ ಆಯ್ಕೆ ಮಾಡಿದರೆ ಬುಕ್ಕಿಂಗ್ complete ಆಗುತ್ತದೆ.
ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಅದರಿಂದ ವಾಟ್ಸಾಪ್ ಮೂಲಕ ಗ್ಯಾಸ್ ಬುಕ್ ಮಾಡೋದು ಇನ್ನೂ ಈಸಿಯಾಗಿದೆ. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಿಂದ ಇಂಡೇನ್ ಗ್ರಾಹಕರು 7588888824 ಗೆ “REFILL” ಎಂದು ಕಳುಹಿಸಬಹುದು. ಭಾರತ್ ಗ್ಯಾಸ್ ಗ್ರಾಹಕರು 1800224344 ಮತ್ತು ಹೆಚ್‌ಪಿ ಗ್ಯಾಸ್ (HP Gas) ಗ್ರಾಹಕರು 9222201122 ಗೆ “Hi” ಎಂದು ಮೆಸೇಜ್ ಮಾಡಿದರೆ ಕ್ಷಣದಲ್ಲೇ ಬುಕಿಂಗ್ ಕನ್ಫರ್ಮ್ ಆಗುತ್ತದೆ.
ಇಂಟರ್ನೆಟ್ ಇಲ್ಲದವರಿಗೂ ಕೂಡ ಒಳ್ಳೆಯ ಸೌಲಭ್ಯ ಇದೆ. ಕೇವಲ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು, ಗ್ಯಾಸ್ ಬುಕ್ ಆಗುತ್ತದೆ. ಇಂಡೇನ್ ಗ್ರಾಹಕರು 8454955555, ಭಾರತ್ ಗ್ಯಾಸ್ ಗ್ರಾಹಕರು 7710955555 ಹಾಗೂ ಹೆಚ್‌ಪಿ ಗ್ಯಾಸ್ ಗ್ರಾಹಕರು 9493602222 ನಂಬರ್‌ಗೆ ಮಿಸ್ಡ್ ಕಾಲ್ ಕೊಟ್ಟರೆ SMS ಮೂಲಕ ದೃಢೀಕರಣ ಬರುತ್ತದೆ.
ಇದಕ್ಕೆ ಜೊತೆಗೆ ನೀವು ಬಳಸುವ ಡಿಜಿಟಲ್ ಪೇಮೆಂಟ್ ಆ್ಯಪ್‌ಗಳಾದ ಪೇಟಿಎಂ, ಗೂಗಲ್ ಪೇ ಮತ್ತು ಫೋನ್‌ಪೇ ಮೂಲಕವೂ ಗ್ಯಾಸ್ ಬುಕ್ ಮಾಡಬಹುದು. ಆ್ಯಪ್‌ನಲ್ಲಿ ‘Recharge & Pay Bills’ ಅಥವಾ ‘Book Cylinder’ ಆಯ್ಕೆ ಮಾಡಿ, ನಿಮ್ಮ ಗ್ಯಾಸ್ ಕಂಪನಿಯನ್ನು ಸೆಲೆಕ್ಟ್ ಮಾಡಿ, ಮೊಬೈಲ್ ನಂಬರ್ ಅಥವಾ LPG ID ಹಾಕಿ ಪಾವತಿ ಮಾಡಿದರೆ ಬುಕಿಂಗ್ ಕ್ಷಣಾರ್ಧದಲ್ಲಿ ಮುಗಿಯುತ್ತದೆ.
ಪೇಮೆಂಟ್ ಆ್ಯಪ್‌ಗಳ ಜೊತೆಗೆ ಗ್ಯಾಸ್ ಕಂಪನಿಗಳ ಅಧಿಕೃತ ಆ್ಯಪ್‌ಗಳೂ ಲಭ್ಯವಿವೆ. ಇಂಡಿಯನ್ ಆಯಿಲ್ ಒನ್ (IndianOil One), ಭಾರತ್ ಗ್ಯಾಸ್ ಆ್ಯಪ್ ಮತ್ತು ಹೆಚ್‌ಪಿ ಪೇ (HP Pay) ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಈ ಆ್ಯಪ್‌ಗಳಲ್ಲಿ ನೀವು ಗ್ಯಾಸ್ ಬುಕ್ ಮಾಡೋದು ಮಾತ್ರವಲ್ಲ, ಸಿಲಿಂಡರ್ ಡೆಲಿವರಿ ಸ್ಟೇಟಸ್ ಅನ್ನು ಕೂಡ
ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಜನರು ಅಗತ್ಯಕ್ಕಿಂತ ಹೆಚ್ಚು ಸ್ಟಾಕ್ ಮಾಡಿಕೊಳ್ಳುವುದನ್ನು ತಪ್ಪಿಸಲು ಎಲ್‌ಪಿಜಿ ರಿಫಿಲ್ ಕಾಯುವ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಆದರೂ ದೇಶದಲ್ಲಿ ಎಲ್‌ಪಿಜಿ ಪೂರೈಕೆ (LPG Supply) ಸಮರ್ಪಕವಾಗಿದ್ದು, ಮನೆ ಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಒಟ್ಟಿನಲ್ಲಿ ಗ್ಯಾಸ್ ಬುಕ್ಕಿಂಗ್ ಈಗ ತುಂಬಾ ಸರಳವಾಗಿದೆ. ವಾಟ್ಸಾಪ್, ಮಿಸ್ಡ್ ಕಾಲ್, ಮೊಬೈಲ್ ಆ್ಯಪ್ ಅಥವಾ IVRS — ನಿಮಗೆ ಯಾವುದು ಸುಲಭವೋ ಅದನ್ನೇ ಆಯ್ಕೆ ಮಾಡಿ. ಡಿಜಿಟಲ್ ವಿಧಾನ ಬಳಸಿಕೊಂಡು ತಕ್ಷಣವೇ ಸಿಲಿಂಡರ್ ಬುಕ್ ಮಾಡಿ, ಯಾವುದೇ ಟೆನ್ಷನ್ ಇಲ್ಲದೇ ನಿಮ್ಮ ಅಡುಗೆ ಕೆಲಸಗಳನ್ನು ಸುಗಮವಾಗಿ ಮುಂದುವರಿಸಿ!
Read More: ಚಿನ್ನದ ಬಗ್ಗೆ ಮೋದಿ ಸರ್ಕಾರದ ಹೊಸ ಘೋಷಣೆ! 3 ತಿಂಗಳು ಹೆಚ್ಚುವರಿ ಸಮಯ – ಯಾರಿಗೆ ಲಾಭ?